ನವಿಲು ಗರಿ ಕೆನ್ನೆ ಸವರಿದಂತೆ
ಮನದಲ್ಲಿ ನವಿರಾದ ಭಾವಗಳ ಕಂಪನ
ನನ್ನ ಪ್ರೇಮ ಸುನಾಮಿಯಂತೆ ನಿನ್ನ ಬಂದು
ಅಪ್ಪಳಿಸುವುದಿಲ್ಲ
ಆದು ಅಲೆ ತೀರದೆಡೆ ಬಂದಂತೆ ಎಂದೆಂದೂ
ಬರುವುದು ನಿನ್ನೆಡೆಗೆ
ನನ್ನ ಪ್ರೇಮ ಭೋರ್ಗೆರೆಯುವ ಮಳೆಯಂತೆ
ಸುರಿಯುವುದಿಲ್ಲ
ಅದು ಮನಕ್ಕೆ ಮುದ ಕೊಡುವ ತುಂತುರು
ಮಳೆಹನಿ
ನನ್ನ ಪ್ರೇಮ ಜ್ವರದಂತೆ ಬಂದು ಕಾಡಿ
ಹೋಗುವುದಿಲ್ಲ
ಅದು ಮ್ಯೆ ಮೇಲಿನ ಮಚ್ಚೆಯಂತೆ ಇರುವುದು
ಜೊತೆಗೆ ಕೊನೆ ತನಕ