Friday, 20 November 2009

ಮರೀಚಿಕೆ


ನಿನಗಾಗಿ ಹಂಬಲಿಸಿದೆ ನೀ ಬಂದು ನನ್ನ ಸೇರಿದಾಗ
ಎನು ಮಾಡಲೆಂದು ತಿಳಿಯದೆ ಚಡಪಡಿಸಿದೆ

ನೀನು ಸಿಕ್ಕರೆ ಬಾಳು ಸಕ್ಕರೆ ಜೀವನವೆಲ್ಲಾ ಅಕ್ಕರೆ
ಎಂಬ ಕನಸ ಕಂಡೆ ನೀ ಜೊತೆಯಾದ ಬಳಿಕ
ನಿನ್ನ ಪಡೆಯಲು ಪಟ್ಟ ಕಷ್ಟಗಳ ಸರಮಾಲೇಯೇ
ಮಧುರವೆನಿಸುತಿದೆ

ಕಂಡ ಕಂಡ ದೇವರಲ್ಲಿ ನಿನಗಾಗಿ ಹರಕೆ ಹೊತ್ತೆ
ಉಳಿದೆಲ್ಲ ಸುಖವ ಕಡೆಗಾಣಿಸಿ ನಿನಗಾಗಿ ಹಾತೊರೆದೆ
ಇಂದು ನೀ ಜೊತೆಗಿರಿ ನೆಮ್ಮದಿ ಸುಖ
ಹಗಲುಗನಸಾಗಿದೆ

Saturday, 14 November 2009

ಒಂದು ಮುಸ್ಸಂಜೆ

ಮುಸ್ಸಂಜೆಯ ತಂಗಾಳಿ ಸುಮಗಂಧ ಪಸರಿಸಿರೆ
ನದೀ ತೀರದಿ ನೀ ನನ್ನ ಬೆನ್ನಿಗಾತು ಕುಳಿತಿರೆ
ಇಳಿದಿತ್ತು ನಾಕವೇ ಭುವಿಗೆ ಮರೆಸಿತ್ತು ಇಲ್ಲಿನ ನರಕ

ಗೋವುಗಳ ಮಂದೆ ಊರಿನೆಡೆ ಸಾಗುತಿರೆ
ಕೊರಳ ಗೆಜ್ಜೆಯ ನಿನಾದ ಕಿವಿಯಲ್ಲಿ ಹಾಡುತಿರೆ
ನಿನ್ನ ಇನಿದನಿಯ ಮಾತು ಸುಮಧುರ ಸಂಗೀತ
ಹಕ್ಕಿಗಳ ಇಂಚರವೇ ಅದಕೆ ತಾಳ ಮೇಳ

ಪಡುವಣದಿ ಸೂರ್ಯ ಆಗಸದಿ ಕೆಂಪು ಹರಡಿರೆ
ನಿನ್ನ ಮೊಗದ ಕೆಂಪು ಅದರೊಡನೆ ಮಿಳಿತವಾಗಿರೆ
ಆವರಿಸುತ್ತಿದ್ದ ಕತ್ತಲಿಗೆ ನಿನ್ನ ಕಣ್ಣು ಮಿನುಗುತಿರೆ
ನನ್ನ ನಾನೇ ಮರೆತು ನಿನ್ನೊಳಗೆ ಸೇರಿದ್ದೆ

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ