ಯಾರಾದರೊಬ್ಬರೂ ನನ್ನವರೆಂದು ಹೇಳಿಕೊಳ್ಳಲಿರ ಬೇಕಿತ್ತು
ಸಮೀಪದಲ್ಲದಿದ್ದರೂ ದೂರದಲ್ಲಾದರೂ ಇರಬೇಕಿತ್ತು
ಕಣ್ಣೀರು ಕಡಲಾಗಿ ಉಕ್ಕುತ್ತಿತ್ತು ನಿದ್ರೆ ಕನಸಾಗಿತ್ತು
ತಿಂಗಳ ಬೆಳಕು ಸುಡುವ ಕೆಂಡವಾಗಿತ್ತು
ಯಾರಾದರು ಬಂದು ತಬ್ಬಿಕೊಳ್ಳ ಬೇಕಿತ್ತು
ಕರಗಿ ಹೋಗಲು ಬಾಹು ಬಂಧನ ಸಾಕಾಗಿತ್ತು
ಇಂದಲ್ಲ ನಾಳೆ ಬರುವರೆಂಬ ನಿರೀಕ್ಷೆ ಇತ್ತು
ಮುಕ್ತನಾಗಿ ಹೊಸ ಬದುಕು ನೋಡುವ ಆಸೆಯಿತ್ತು
ಜಾರುತ್ತಿರುವ ಯೌವನ ಸಮೀಪಿಸುತ್ತಿರುವ ಮುಪ್ಪಿನ
ಸುಳಿಯಲ್ಲಿ ಸಿಲುಕಿ ಕಾಯುವ ಶಕ್ತಿ ಆಸಕ್ತಿ ಉಡುಗಿದೆ