Sunday, 19 April 2009

ವಿಚಿತ್ರ

ಎಲ್ಲಾ ಒಟ್ಟಿಗಿರಿ ಎಂದ ದೇವರು
ನಾವು ನಮ್ಮ ಮಧ್ಯೆ ಸರಹದ್ದು
ಹಾಕಿ ಕೊಂಡೆವು

ಚಂದ್ರನ ಮೇಲೆ ಅಡಿಯಿಟ್ಟು ಬಂದೆವು
ಆದರೆ ಪಕ್ಕದ ಮನೆಗೆ ಹೋಗಿ ನಕ್ಕು
ಮಾತಾಡಲೊಲ್ಲೆವು

ಸುಂದರವಾದ ಮನೆಗಳನ್ನು ಕಟ್ಟಿ ಕೊಂಡು
ನಲಿದಾಡಿದೆವು ಆದರೆ ಮನಗಳಲ್ಲಿ
ವಿಷ ತುಂಬಿಸಿ ಕೊಂಡೆವು

ಹೇಳದೇ ಹೋದವಳಿಗೆ

ನೀ ನನ್ನ ತೊರೆದು ಹೋದದ್ದು ನಾ ತಪ್ಪೆನ್ನುತ್ತಿಲ್ಲ
ಕಾರಣ ಹೇಳಿ ಹೋಗುತ್ತಿದ್ದರೆ ತಿದ್ದಿ ಕೊಳ್ಳಲು
ಅವಕಾಶವಾದರೂ ಸಿಗುತ್ತಿತ್ತು

ನಾ ಕೊಟ್ಟ ಕಾಣಿಕೆಗಳನ್ನೆಲ್ಲಾ ಮರಳಿಸಿದೆ.
ನಾ ನಿನಗೆ ತೋರಿಸಿದೆ ಪ್ರೀತಿ ನಿನಗಾಗಿ
ಕಟ್ಟಿದ ಬಣ್ಣ ಬಣ್ಣದ ಕನಸಗಳನ್ನು ಏನು ಮಾಡಿದೆ?

ಮರದ ಕೆಳಗೆ ಅಪ್ಪಿಕೊಂಡು ಕಣ್ಣೀರಾಗುತ್ತಿದ್ದಾಗ,
ಕೈ ಹಿಡಿದು ನಡೆಯತ್ತಿದ್ದಾಗು ಸಿಗುತ್ತಿದ್ದ
ನೆಮ್ಮದಿಯ ನೆನಪಾದರೂ ನಿನಗಿದೆಯಾ?

ತಪ್ಪು ನಿನ್ನದಲ್ಲ ಅದೆಲ್ಲಾ ನನ್ನದೇ
ಹಾಲಾಹಲವನ್ನು ಹಾಲೆಂದು ತಿಳಿದದ್ದು
ಮುಗ್ಢ ಮುಖ ನೋಡಿ ಮರುಳಾದದ್ದು

ನನ್ನವಳು

ನಿನ್ನೆ ರಾತ್ರಿ ಹುಣ್ಣಿಮೆಯಲ್ಲ
ಆದರೂ ನನ್ನ ಮನೆಯಲ್ಲಿ ಬೆಳದಿಂಗಳಿತ್ತು
ಯಾಕೆಂದರ ಜೊತೆಗಿದ್ದೆಯಲ್ಲವೇ ನೀನು

ಮೊದಲ ಬಾರಿ ನಿನ್ನನ್ನು ನೋಡಿದಾಗ
ನಿನ್ನಲ್ಲೆ ಸೇರಿಹೋದ ಮನಸ್ಸು ನೀ ನನ್ನ
ಜೊತೆ ಸೇರಿದರೂ ಮರಳಿ ಬರಲೊಲ್ಲದು

ಜೊತೆಗೆ ಸಾಗುವ ದಾರಿಯಲ್ಲೆಲ್ಲ ಹೂವಿರಲಾರದು
ಆದರೆ ಬಾಳ ದಾರಿಯ ಸಂಗಾತಿಯಾಗಿ ನೀನಿರೆ
ಚುಚ್ಚುವ ಮುಳ್ಳಿನ ನೋವೂ ನಲಿವಿನಂತೆ

Wednesday, 8 April 2009

ನಗು

ನಕ್ಕು ಬಿಡು ಗೆಳತಿ ಇನ್ನೊಮ್ಮೆ
ಮನ ತುಂಬಿ ನಕ್ಕು ಬಿಡು
ಎಳೆಗರುವಿನ ಕೊರಳ ಗೆಜ್ಜೆಯ
ನಾದದಂತೊಮ್ಮೆ ಕಿಲಕಿಲನೆ
ನಕ್ಕುಬಿಡು

ಮೊದಲ ಬಾರಿಗೆ ನಾ
ಕಚಗುಳಿಯಿಟ್ಟಾಗ ನಕ್ಕಂತೊಮ್ಮೆ
ನಕ್ಕು ಬಿಡು
ಮಗು ಪುಟ್ಟ ಹೆಜ್ಜೆಯಿಟ್ಟಾಗ
ಖುಶಿಯಲ್ಲಿ ಅಮ್ಮ ನಕ್ಕಂತೊಮ್ಮೆ
ನಕ್ಕು ಬಿಡು

ಹಾಲುಗಲ್ಲದ ಹಸುಳೆ ಅಮ್ಮನ
ಎದೆ ಹಾಲು ಕುಡಿದು ನಗುವಂತೊಮ್ಮೆ
ನಕ್ಕು ಬಿಡು
ನಿನ್ನ ನಿಷ್ಕಲ್ಮಶ ನಗುವ
ಕಂಡು ನಾ ನನ್ನೇ ಮರೆವಂತೊಮ್ಮೆ
ನಕ್ಕು ಬಿಡು.

Saturday, 4 April 2009

ಲೋಕದ ನಿಯಮ

ಈ ಲೋಕದ ನಿಯಮವೇ ಹೀಗೆ
ಆಸರೆ ಬೇಕಾದಾಗ ಆದರಿಸುವರಿಲ್ಲ
ಬೇಡವಾಗಿದಾಗ ಬಂದು ಕೇಳುವರೆಲ್ಲಾ

ಬಾಯಾರಿದವನಿಗೆ ತೊಟ್ಟು ನೀರು ಕೊಡುವರಿಲ್ಲ
ಬೇಡವಾಗಿದ್ದಾಗ ಕರೆದು ಕೊಡುವರು ಹಾಲು ಬೆಲ್ಲ
ಕಸದ ತೊಟ್ಟಿಯಲ್ಲಿನ ಅನ್ನ ತಿನ್ನುವುದನ್ನು ಕಂಡರು
ಕಾಣದಂತೆ ಸಾಗುವ ನಾವು ಜಾಣ ಕುರುಡರು

ಒಂದು ತೊಟ್ಟು ಪ್ರೀತಿಗಾಗಿ ಹಾತೊರೆಯುತ್ತಿದ್ದಾಗ
ದ್ವೇಷಿಸುವವರೆ ಸುತ್ತ ಮುತ್ತ ನಮ್ಮನ್ನೆಲ್ಲರಾಗ
ಅದೇ ನಮಗೇನಾದರು ಇನ್ನೊಬ್ಬರಿಂದ ಬೇಕಾದರೆ
ಮೂರೂ ಬಿಟ್ಟು ಹೋಗಿ ನಿಲ್ಲುವೆವರೆದುರು

ನಿರೀಕ್ಷೆ

ನಿನ್ನ ದನಿ ಕೇಳಲು ಕಾದಿರುವೆ ಓ ಅಪರಿಚಿತಳೆ
ನೀನಲ್ಲಿ ನಾನಿಲ್ಲಿ ಕಳೆಯುತ್ತಿರುವೆವು ಅರ್ಥವಿಲ್ಲದ ಬಾಳು
ಭೋರ್ಗೆರುಯುತಿದೆ ಮನದಾಳದಲ್ಲಿ ಅಳಲು
ನಿಲ್ಲುವುದದು ಒಮ್ಮೆ ನೀ ನುಡಿಸೆ ಕೊಳಲು
ಕಾಡುತಿದೆ ಒಳಗೆ ಹೊರಗೆ ಕವಿದ ಕತ್ತಲು
ಓಡಿಸುವುದದ ನಿನ್ನ ನಗೆಯ ಬೆಳದಿಂಗಳು

ನಿಲುಕದ ತಾರೆಯ ಆಸೆಯಲ್ಲಿ ಚಡಪಡಿಸುತಿರೆ
ಸಂತ್ಯೆಸಲೊಂದು ಮಿಂಚು ಹುಳ ಬಂದೀತೇ
ಮನ ಬಿರುಗಾಳಿಗೆ ಸಿಲುಕಿದ ಹಾಯಿದೋಣಿ
ಜೀವ ಉಳಿಸಿ ದಡ ಸೇರಿಸುವರಾರು ಕಾಣೆ

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ