ಮರುಭೂಮಿಯಲ್ಲಿ ಮರೀಚಿಕೆಯ ಹಿಂಬಾಲಿಸಿ
ಹೊರಟ ಒಂಟಿ ಪಯಣಿಗ ನಾನೀಗ
ನಂದಾದೀಪವ ಹಚ್ಚುವೆ ಎಂದು ಕಾದರೆ
ಇದ್ದ ಹಣತೆಯನ್ನೂ ಆರಿಸಿದೆ
ಕನಸಿನ ಲೋಕದಿ ವಿಹರಿಸುತ್ತಿದ್ದವಗೆ
ತೋರಿಸಿದೆ ಕಟು ವಾಸ್ತವ
ಮನೆ ಮನ ಬೆಳಗಿಸಿವೆಯೆಂದು ಆಸೆಯಲ್ಲಿರೆ
ತಣ್ಣೀರೆರಚಿದೆ ಎಲ್ಲಾ ಬಯಕೆಗಳಿಗೆ
ಆದರೂ ನಾನಿಲ್ಲಿ ಬದುಕುತ್ತಿದ್ದೇನೆ
ಕಾಯುವವ ಕೊಲ್ಲುವ ತನಕ