Friday, 25 September 2009

ನಾನು - ನೀನು

ನಿಂತ ಕಡಲು ನೀನು ನಿನ್ನ ಸೇರಲು
ಹಾತೊರೆದು ಹರಿದು ಬರುವ ನದಿ ನಾನು

ಸಾಗುವ ದಾರಿಯಲ್ಲೊಮ್ಮೆ ಜಲಪಾತವಾಗಿ
ಇನ್ನೊಮ್ಮೆ ಸೌಮ್ಯ ತೊರೆಯಾಗಿ
ಮತ್ತೊಂದೆಡೆ ಕೆಸರ ಗುಂಡಿಯಾಗಿ
ಛಲ ಬಿಡದೆ ನಿನ್ನೆಡೆಗೆ ಸಾಗಿ ಬರುವೆ

ಒಂದೆಡೆ ಸಾಗಿಸುವೆ ಹೆಣಗಳ ರಾಶಿ
ಇನ್ನೊಂದೆಡೆ ಪಾಪ ತೊಳೆಯುವ ಕಾಶಿ
ಯಾವುದೇ ಬಂಧನಕ್ಕು ಸಿಲುಕದೆ
ಛಲ ಬಿಡದೆ ನಿನ್ನೆಡೆಗೆ ಸಾಗಿ ಬರುವೆ

ಎಲ್ಲೋ ಅನ್ನಿಸಿತ್ತು ನಾನೇ ಸರ್ವ ಶ್ರೇಷ್ತ
ನಿನ್ನ ಅಗಾಧತೆಯ ನೆನಪು ಬಂದು ನನ್ನ
ಅಹಂಕಾರವ ಹೊಸಕಿ ಹಾಕಿತ್ತು
ಛಲ ಬಿಡದೆ ನಿನ್ನೆಡೆಗೆ ಸಾಗಿ ಬರುವೆ

No comments:

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ