ಮನದ ಚೆಲುವ ತೋರಿಸುವ ಕನ್ನಡಿಯ
ಹುಡುಕುತ್ತಿದ್ದೆ
ಹುಚ್ಚ ಮುಖದ ಚೆಲುವ ನೋಡಿ ಖುಶಿ ಪಡೆಂದು
ನಗುತ್ತಿದ್ದರೆಲ್ಲಾ
ಅಮ್ಮನ ಪ್ರೀತಿಯ ಸೆಲೆ ತೋರಿಸುವ
ಪ್ರೇಯಸಿಯ ಒಲವಿನ ಅಲೆ ತೋರಿಸುವ
ಗೆಳೆಯನ ಆತ್ಮೀಯತೆಯ ನೆಲೆ ತೋರಿಸುವ
ಯಾರಾದರೂ ಒಬ್ಬರಿದ್ದಾರೆಯೆ ಹುಡುಕುತ್ತಿದ್ದೆ
ತಪ್ಪು ತಿದ್ದುವ ಪ್ರಬುದ್ದ ಗುರುವಿನಂತೆ
ಜೀವನದ ದಾರಿ ತೋರಿಸುವ ದಾರ್ಶನಿಕನಂತೆ
ಕೈ ಹಿಡಿದು ನಡೆಯುವ ಮುಗ್ಧ ಮಗುವಿನಂತೆ
ಯಾರಾದರೂ ಒಬ್ಬರಿದ್ದಾರೆಯೆ ಹುಡುಕುತ್ತಿದ್ದೆ
ದೊಡ್ಡ ಕಣ್ಣು ಬಿಟ್ಟು ಕಥೆ ಕೇಳುತ್ತಿದ್ದ ಗೆಳತಿಯಂತೆ
ರಾಮಾಯಣದ ನೀತಿ ಹೇಳುತ್ತಿದ್ದ ಅಜ್ಜನಂತೆ
ಹೊಟ್ಟೆ ಹಸಿದಾಗ ಅನ್ನ ಕೊಟ್ಟ ಅಕ್ಕನಂತೆ
ಯಾರಾದರೂ ಒಬ್ಬರಿದ್ದಾರೆಯೆ ಹುಡುಕುತ್ತಿದ್ದೆ
7 comments:
good..:)
thank you Gautham.
ಹುಡುಕಾಟ ಮಸ್ತ್ ಇದೆ, ಸುಂದರ ಕವನ
ಕವನ ಚೆನ್ನಾಗಿದೆ .ಹುಡುಕಾಟ ಮುಂದುವರಿಯಲಿ .ನಾವು ಹುಡುಕುವ ಎಲ್ಲವೂ ನಮ್ಮ ಅರಿವಿಗೇ ನಿಲುಕಬಹುದು.ಅದಕ್ಕೇ ಅರಿವೇ ಗುರು ಎಂದು ಹೇಳುತ್ತಾರೇನೋ!ನಮಸ್ಕಾರ .ನನ್ನ ಬ್ಲಾಗಿಗೂ ಬನ್ನಿ.
ನಿಮ್ಮ ಹುಡುಕಾಟದ ಜನ ನಿಮ್ಮ ಸುತ್ತ ಮುತ್ತ ಬ್ಲೊಗ್ ಮಾಡ್ಕೊ೦ಡಿ ಇದ್ದಾರೆ. ಎಲ್ಲರೂ ಇದ್ದಾರೆ ಚಿ೦ತೆ ಬೇಡ!!
ಚೆ೦ದ ಆಶಯದ ಕವನ.
sigalillave...?
nice poem..
Thanks to everyone for your comments and encouragement. I am trying to write more poems :-) and connect to like minded people like all of you. thank you
Post a Comment