Thursday 29 July 2010

ನಾನು ನೀನು

ನಾನು ನೀನು ನೀನು ನಾನು
ಎಂದಾದೇವು ನೀನೇ ನಾನು ನಾನೇ ನೀನು

ವೈಣಿಕನಿಲದ ವೀಣೆಯ ತರದಿ
ನುಡಿಸುವರಿಲ್ಲದ ಕೊಳಲಿನ ತರದಿ
ಒಬ್ಬರನೊಬ್ಬರು ಅಗಲಿ ಬದುಕೆ
ಬರಡು ಮರುಭೂಮಿ ಜೀವಿತ

ಅರ್ಪಣೆ ಸಮರ್ಪಣೆ ಇಲ್ಲದ ಬಾಳು
ನೆನೆದರೇ ನಡುಕ ಮನದಲಿ
ಎಂದು ಮರೆತೇವು ನಮ್ಮ ಹಮ್ಮು
ಒಂದಾದೇವೆಂದು ನೆಮ್ಮದಿಯನರಸಲು

8 comments:

Dr.D.T.Krishna Murthy. said...

'ಎಂದು ಮರೆತೇವು ಹಮ್ಮು ,ಎಂದು ಒಂದಾದೇವು ನೆಮ್ಮದಿಯನರಸಲು';ಸುದರ ಸಾಲುಗಳಲ್ಲಿ ಮೂಡಿಬಂದಿದೆ ಕವನ.ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.

ಸೀತಾರಾಮ. ಕೆ. / SITARAM.K said...

nice poem

PrashanthKannadaBlog said...

ಹೌದು ಸರ್. ನಾವು ಯಾರೂ ಸೋತು ಗೆಲ್ಲುಲು ತಯಾರಿಲ್ಲ. ಅಲ್ಲೇ ಎಲ್ಲಾ ಸಮಸ್ಯೆ ಅಡಗಿದೆ.ಪ್ರೋತ್ಸಾಹಕ್ಕೆ ದನ್ಯವಾದಗಳು.

ದಿನಕರ ಮೊಗೇರ said...

ಚೆನ್ನಾಗಿ ಬರೆದಿದ್ದೀರಾ..... ಹೇಗೆ ಅವರಿಲ್ಲದೆ ನಾವಿಲ್ಲವೋ, ನಾವಿಲ್ಲದೇ ಅವರಿಲ್ಲ ಎನ್ನುವ ಸತ್ಯವೂ ಅವರಿಗೆ ತಿಳಿ ಮಾಡಬೇಕು ಆಲ್ವಾ...

PrashanthKannadaBlog said...

ಅರಿತು ಬೆರೆತರೇ ಬಾಳು ಚೆನ್ನ ದಿನಕರ್ ಸರ್. ಧನ್ಯವಾದಗಳು.

ಮನಮುಕ್ತಾ said...

ನಿಜ.. ಅರಿತುಬಾಳಿದರೇನೆ ಸುಖ...ಚೆನ್ನಾಗಿದೆ ಕವನ.

ಸೀತಾರಾಮ. ಕೆ. / SITARAM.K said...

ಚೆಂದದ ಕವನ -ಅರ್ಪಣೆ ಸಮರ್ಪಣೆ ತುಂಬಾ ಮುದ್ದಾದ ಸಂದೇಶ!

V.R.BHAT said...

Ego is the First item to destroy everything, ನಿಮ್ಮ ಕವನ ಚೆನ್ನಾಗಿದೆ!

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ