ನಾನೇಕೋ ಜೀವನದಲ್ಲಿ ಸಣ್ಣಪುಟ್ಟ ಸಂತೋಷಗಳನ್ನು ಕಳೆದು ಕೊಳ್ಳುತ್ತಿದ್ದೇನ ಎಂಬ ನೋವು ಕಾಡುತ್ತಿದೆ.
ಬಾಲ್ಯದಲ್ಲಿ ಪಕ್ಕದ ಮನೆಯ ದೋಬಿಯ ಬಟ್ಟೆ ಒಗಯುವ ಟ್ಯಾಂಕ್ ನಲ್ಲಿ ಪಟಾಕಿ ಸಿಡಿಸಿದಾಗ ಸಿಗುತ್ತಿದ್ದ ಖುಶಿ,
ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಾಗ ಆಗುತ್ತಿದ್ದ ಸಂತಸ, ಅಜ್ಜ ಚಾಕೊಲೇಟ್ ತಂದು ಕಟ್ಟಾಗ ಸಿಗುತ್ತಿದ್ದ ಆನಂದ ಎಲ್ಲಿ ಕಳೆದು ಹೋಯಿತು? ನವರಾತ್ರಿಯ ದಿನ ಹುಲಿವೇಷ ಕುಣಿದು ಸಿಕ್ಕ ಚಿಲ್ಲರೆ ದುಡ್ಡಿನಲ್ಲಿ ಹೋಟೆಲಿನಲ್ಲಿ ದೋಸೆ ತಿನ್ನುತ್ತಿದ್ದಾಗ ಆಗುತ್ತಿದ್ದ ಸಂತೋಷ ಏನಾಯಿತು?
ಬೆಂಗಳೂರಿಗೆ ಬಂದ ಹೊಸತರಲ್ಲಿ ಇದ್ದ ಸಣ್ಣಪುಟ್ಟ ಕನಸುಗಳು, ಚಿಕ್ಕ ಪುಟ್ಟ ಬಯಕಗಳು, ಅದಕ್ಕೋಸ್ಕರ ಮಾಡುತ್ತಿದ್ದ ಪ್ಲಾನ್ ಗಳಲ್ಲಿ ಕಾಣುತ್ತಿದ್ದ ನೆಮ್ಮದಿ ಎಲ್ಲಿ ಕಣ್ಮರೆಯಾಯಿತು?
ವಿದ್ಯಾರ್ಥಿ ಭವನದ ಮಸಾಲ ದೋಸೆ ರುಚಿ ನೆನೆಸಿದಾಗಲೆಲ್ಲ ನಾಲಿಗೆಯಲ್ಲಿ ನೀರೂರುತ್ತಿತ್ತು. ಈಗ ಪಂಚತಾರ ಹೋಟೆಲಿನ ವಿವಿದ ಖಾದ್ಯಗಳೇಕೆ ರುಚಿಸುತ್ತಿಲ್ಲ.
ಜೀವನದಲ್ಲಿ ಹಂತ ಹಂತವಾಗಿ ಬೆಳೆಯುತ್ತಿದ್ದಂತೆ, ಕನಸುಗಳು ಸಾಕಾರವಾಗುತ್ತಿದ್ದಂತೆ ಆಸೆಯೆಂಬ ಮರೀಚಿಕೆಯ ಬೆನ್ನು ಹತ್ತುತ್ತೇವೇನೋ?
ದುರಾಸೆಯ ಪ್ರಭಾವ ಜೀವನವನ್ನು ಆವರಿಸಿಕೊಳ್ಳುತ್ತಿದೆಯೇನೋ ಎಂಬ ಭಯ ಕಾಡುತ್ತಿದೆ.

3 comments:
ನಿಜ ಬದಲಾವಣೆ ಒಮ್ಮೊಮ್ಮೆ.. ಅಂತರಂಗದಲ್ಲಿ ನೋವು ತರಿಸಿಬಿಡುತ್ತೆ.
ನೀವು ಹೇಳಿದ್ದು ನೂರಕ್ಕೆ ಇನ್ನೂರು ಸತ್ಯ... ಚಿಕ್ಕ ಪುಟ್ಟ ಖುಷಿಗಳು ಎಲ್ಲೋ ಮರೆಯಾಗುತ್ತಿದೆಯಾ..ಅಥವಾ ಎಲ್ಲದರ ನಡುವೆ ಅದನ್ನು ನಾವೇ ಕಳೆದುಕೊಳ್ಳುತ್ತಿದ್ದೇವಾ ಎಂಬುದರ ಬಗ್ಗೆ ಚಿಂತಿಸಬೇಕು..
neevu heliddu nija.. chikka putta khushy galu ello mareyaaguttideya athava naave adarinda doooravagiddeveya..
Post a Comment