ಬಾಲ್ಯದಿಂದಲೂ ನಾನು ಕಂಡು ಕೊಂಡ ಉತ್ತಮ ಸಂಗಾತಿ ಎಂದರೆ ಓದು.
ಓರಗೆಯ ಗೆಳೆಯರೆಲ್ಲಾ ಬೇರೆ ಬೇರೆ ರೀತಿಯ ಮನೋರಂಜನೆಯ ಮಾರ್ಗ ಆರಿಸಿಕೊಂಡಾಗ ನನಗೆ ಇಷ್ಟವಾಗುತ್ತಿದ್ದದ್ದು ಕಥೆ, ಕಾದಂಬರಿಗಳು. ಗೆಳೆಯರು ಬಣ್ಣ ಬಣ್ಣದ ಕನಸು ಕಟ್ಟುತ್ತಿದ್ದರೆ, ನನಗೆ ಬರುತ್ತಿದ್ದ ಕನಸು ಹೊಟ್ಟೆ ತುಂಬಾ ಊಟ ಮಾಡಿದಂತೆ. ಯಾರಿಗೆ ಏನು ಕೊರತೆ ಇದೆಯೋ ಅದು ಕನಸಿನ ರೂಪದಲ್ಲಿ ಬರುತ್ತದಂತೆ.
ಆ ಕಾಲದಿಂದಲೂ ನನ್ನನ್ನು ನಾನಾಗಿ ಬದುಕಲು, ಬೆಳೆಯಲು ಅನುವು ಮಾಡಿ ಕೊಟ್ಟದ್ದು ಕಥೆ ಪುಸ್ತಕಗಳು.
ಏನಾದರೂ ಬರೆಯ ಬೇಕೆಂಬ ತುಡಿತ ತುಂಬಾ ದಿನದಿಂದ ಕಾಡುತ್ತಿತ್ತು. ಯಾಕೋ ಏಕಾಗ್ರತೆ ಬರುತ್ತಿರಲಿಲ್ಲ. ೩ ತಿಂಗಳಿಂದ ನನ್ನದಲ್ಲದ ದೇಶದಲ್ಲಿ ಹೊಟ್ಟೆ ಪಾಡಿಗಾಗಿ ದುಡಿಯುತ್ತಿದ್ದೇನೆ.
ಜೀವನದಲ್ಲಿ ಅನುಭವಿಸಿದ ಒಳಿತು, ಕೆಡುಕುಗಳನ್ನು ಕಥೆ ಕವನದ ರೂಪದಲ್ಲಿ ತೋಡಿ ಕೊಳ್ಳುತ್ತಿದ್ದೇನೆ. ನಿಮ್ಮ ಅನುಭವಗಳನ್ನು ದಯವಿಟ್ಟು ಹಂಚಿಕೊಳ್ಳಿ. ಆದರೆ ಒಂದು ಕೋರಿಕೆ ಯಾರ ಮನಸ್ಸಿಗೂ ನೋವಾಗುವಂತೆ ಬರೆಯಬೇಡಿ. ಓದು ಮನಸ್ಸಿಗೆ ಮುದ ಕೊಟ್ಟರೆ ಅಥವಾ ಇನ್ನೂ ಚೆನ್ನಾಗಿ ಬರೆಯ ಬಹುದೆನಿಸಿದರೆ ಬಿಚ್ಚು ಮನಸ್ಸಿನಿಂದ ತಿಳಿಸಿ.
ಪ್ರೀತಿಯಿಂದ
ಪ್ರಶಾಂತ
No comments:
Post a Comment