ಕದ್ದು ಮುಚ್ಚಿ ರಾತ್ರಿ ಹಗಲು
ರೋದಿಸುತ್ತಿದ್ದದ್ದಿನ್ನೂ ನೆನಪಿದೆ
ಇಂದಿಗೂ ಆ ನಮ್ಮ ಪ್ರೀತಿಯ ಯುಗದ ನೆನಪಿದೆ
ನಿನ್ನ ಸೆರಗಿನ ಕೊನೆ ಹಿಡಿದು ನಾನೆಳೆಯುತಿರೆ
ಅಂಗೈಯಲ್ಲಿ ಮುಖ ಮುಚ್ಚಿ ನೀ ನಾಚುತ್ತಿದ್ದದ್ದಿನ್ನೂ ನೆನಪಿದೆ
ಬಿರು ಬಿಸಿಲಿನಲ್ಲಿ ನನ್ನನ್ನು ಹುಡುಕಿಕೊಂಡು
ಬರೆಗಾಲಲ್ಲಿ ನೀನು ಬರುತ್ತಿದ್ದದ್ದಿನ್ನೂ ನೆನಪಿದೆ
ನನ್ನನ್ನು ನೋಡಿಕೊಂಡು ನಿನ್ನನ್ನು ನೀನು ಮರೆತು
ಎದೆ ತುಂಬಿ ಹಾಡುತ್ತಿದ್ದದ್ದಿನ್ನೂ ನೆನಪಿದೆ
ದೂರವಾಗಲೇ ಬೇಕಾದ ಆ ಹೊತ್ತಿನಲ್ಲಿ
ನೀನತ್ತು ನನ್ನನಳಿಸಿ ಕಳಿಸಿದ್ದಿನ್ನೂ ನೆನಪಿದೆ
No comments:
Post a Comment