ಜೀವನ ನಿನ್ನ ಒಲುಮೆಯ ಸಾಗರ
ನಿನ್ನೊಂದಿಗಿನ ಮಿಲನ ಶುಭ ಆಶೀರ್ವಾದ
ಯಾವುದೋ ತೇಲಿ ಬಂದ ಸುವಾಸನೆ
ನಿನ್ನ ಸವಿ ನೆನಪು ಹೊತ್ತು ತಂದಿದೆ
ನನ್ನ ಮನಸ್ಸಿನ ಬಾಗಿಲು ಕೂಡಲೇ
ನಿನಗಾಗಿ ತೆರೆದಿದೆ
ನಿನ್ನ ಸುಮಧುರ ದನಿಯ ಮಧುರತೆಯಿಂದ
ಮ್ಯೆ ಮನ ನೆಂದು ಹೋಗಿದೆ
ನಿನ್ನೊಂದಿಗೆ ಕಳೆದ ರಸನಿಮಿಶಗಳ ಯೋಚನೆ
ತಂದಿದೆ ತುಟಿಯಂಚಿನಲ್ಲಿ ಮುಗುಳ್ನಗೆ
No comments:
Post a Comment