Saturday, 27 December 2008

ಹುಚ್ಚು ಪ್ರೇಮ

ಯಾರೋ ಪ್ರೇಮಿ ಅನ್ನುತ್ತಾರೆ ಇನ್ಯಾರೋ ಹುಚ್ಚ ಅನ್ನುತ್ತಾರೆ
ಆದರೆ ಭೂಮಿಯ ಬಾಯಾರಿಕೆ ಮೋಡಕ್ಕೆ ಗೊತ್ತು
ನಾನು ನಿನ್ನಿಂದ ದೂರವಿಲ್ಲ ನೀನು ನನ್ನಿಂದ ದೂರ ಇಲ್ಲ
ಇದು ನನ್ನ ನಿನ್ನ ಹ್ರದಯಕ್ಕೇ ಗೊತ್ತು

ಪ್ರೇಮ ಒಂದು ಪವಿತ್ರವಾದ ಮಂತ್ರ
ಯಾವಾಗಲೋ ಕಬೀರ ಪ್ರೇಮಿ ಇನ್ಯಾವಗಲೋ ಮೀರಾ
ಇಲ್ಲರೂ ಹೇಳುತ್ತಾರೆ ನನ್ನ ಕಣ್ಣಂಚಿನಲ್ಲಿ ನೀರಿದೆ
ಅದು ಮುತ್ತು ನೀನು ಅರ್ಥ ಮಾಡಿಕೊಂಡರೆ ಇಲ್ಲ ಕೇವಲ ನೀರು

ಸಾಗರದಲ್ಲಿ ನೀರೆಷ್ಟಿದ್ದರೂ ಅದಕ್ಕೆ ಅಳಲು ಸಾಧ್ಯವಿಲ್ಲ
ಭೂಮಿಯ ಮೇಲೆ ಬಿದ್ದ ಮಂಜು ಭೂಮಿಗೆ ಉಳಿಯುವುದೆಲ್ಲ
ನಾನೆಲ್ಲರಿಗೆಷ್ಟು ಆತ್ಮೀಯನಾಗಿದ್ದರೂ ನೀನಿಲ್ಲದೆ ಕಳೆಯುವ
ಪ್ರತೀ ನಿಮಿಷ ಯುಗದಂತೆ ಕಳೆಯುವುದು

ಈ ನೆಲದಿಂದ ಆಕಾಶದವರೆಗೆ ಎರಡೇ ಅಧ್ಬುತ ವಿಷಯ
ಒಂದು ನಿನ್ನ ಮುಗ್ಧತೆ ಇನ್ನೊಂದು ನನ್ನ ಹುಚ್ಚು ಪ್ರೇಮ
ನಿನ್ನ ಹೆಸರಿನೊಂದಿಗೆ ಪ್ರತೀ ಕ್ಷಣ ಜೀವಿಸುತ್ತಿರುವ ನನಗೆ
ಅದರೊಂದಿಗೇ ಎಂದೆಂದೂ ಬಾಳುವ ಆಸೆ

No comments:

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ