ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ. ಬರೆಯುವುದು ನನ್ನ ಅನಿವಾರ್ಯ ಆಗಿದೆ. ನೆನಪು, ವಿರಹ ವೇದನೆಯನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಹಕಾರಿಯಾಗಿದೆ. ಎಷ್ಟೋ ಸಲ ಮನಸ್ಸು ಕೇಳುತ್ತದೆ ಅಪ್ಪ ಅಮ್ಮ ಅಲ್ಲಿ ನರಳುತ್ತಿರುವಾಗ, ಮುದ್ದಿನ ಹೆಂಡತಿ ಕಾಯುತ್ತಿರುವಾಗ ಇಲ್ಲಿರುವುದಕ್ಕೆ ಏನು ಅರ್ಥ ಎಂದು. ಆದರೆ ಅನಿವಾರ್ಯತೆಗುಳು ಸರಳ ಜೀವನವನ್ನು ಬಿಟ್ಟು ಈ ಕ್ಲಿಷ್ಟ ಜೀವನವನ್ನು ನಡೆಸುವಂತೆ ಮಾಡಿದೆ. ಈ ಮಾನಸಿಕ ತುಮುಲಗಳಿಂದ ಮುಕ್ತಿ ಪಡೆಯಲು ನಾನು ಬರೆಯುತ್ತೇನೆ. ಯಾರಾದರೂ ಓದಿ ಅವರ ನೋವನ್ನು ೨ ನಿಮಿಷ ಮರೆತರೆ ನನ್ನ ಬರವಣಿಗೆ ಸಾರ್ಥಕ.
1 comment:
ಓದು ಒಳ್ಳೆಯ ಹವ್ಯಾಸ, ಅದರೊಂದಿಗೆ ನಮ್ಮ ವ್ಯಕ್ತಿತ್ವ ಬೆಳವಣಿಗೆ ಆಗುತ್ತಾ ಹೋಗುತ್ತದೆ. ಬರೆಯಬೇಕೆಂಬ ನಿಮ್ಮ ತುಡಿತವನ್ನು ಕಂಡು ಸಂತೋಷವಾಯಿತು. "ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ. ಬರೆಯುವುದು ನನ್ನ ಅನಿವಾರ್ಯ ಆಗಿದೆ." ಇದೆ ಧ್ಯೇಯ ಹೀಗೆ ಮುಂದುವರೆಯಲಿ. ಹೀಗೆ ಬರೆಯುತ್ತಿರಿ.
Post a Comment