ನಿನ್ನ ದನಿ ಕೇಳಲು ಕಾದಿರುವೆ ಓ ಅಪರಿಚಿತಳೆ
ನೀನಲ್ಲಿ ನಾನಿಲ್ಲಿ ಕಳೆಯುತ್ತಿರುವೆವು ಅರ್ಥವಿಲ್ಲದ ಬಾಳು
ಭೋರ್ಗೆರುಯುತಿದೆ ಮನದಾಳದಲ್ಲಿ ಅಳಲು
ನಿಲ್ಲುವುದದು ಒಮ್ಮೆ ನೀ ನುಡಿಸೆ ಕೊಳಲು
ಕಾಡುತಿದೆ ಒಳಗೆ ಹೊರಗೆ ಕವಿದ ಕತ್ತಲು
ಓಡಿಸುವುದದ ನಿನ್ನ ನಗೆಯ ಬೆಳದಿಂಗಳು
ನಿಲುಕದ ತಾರೆಯ ಆಸೆಯಲ್ಲಿ ಚಡಪಡಿಸುತಿರೆ
ಸಂತ್ಯೆಸಲೊಂದು ಮಿಂಚು ಹುಳ ಬಂದೀತೇ
ಮನ ಬಿರುಗಾಳಿಗೆ ಸಿಲುಕಿದ ಹಾಯಿದೋಣಿ
ಜೀವ ಉಳಿಸಿ ದಡ ಸೇರಿಸುವರಾರು ಕಾಣೆ
No comments:
Post a Comment