Friday 11 September 2009

ಈ ಒಂದು ರಾತ್ರಿಯ ಸಮಯ ಕೊಡು

ನಿನ್ನ ನಗರಕ್ಕೆ ಬಂದಿದ್ದೇನೆ ದಾರಿಹೋಕನಾಗಿ
ಒಂದು ಬಾರಿ ಭೇಟಿಯಾಗುವ ಅವಕಾಶ ಕೊಡು

ನನ್ನ ಗುರಿ ಎಲ್ಲಿದೆ ನನ್ನ ಗಮ್ಯ ಎಲ್ಲಿದೆ
ಮುಂಜಾನೆ ನಿನ್ನ ಬಿಟ್ಟು ಹೋಗಲಿ ಎಲ್ಲಿ
ಎಂಬ ಯೋಚನೆ ಮಾಡಲಾದರು
ಈ ಒಂದು ರಾತ್ರಿಯ ಸಮಯ ಕೊಡು

ನನ್ನ ಕಣ್ಣಲ್ಲಿ ಬಚ್ಚಿಟ್ಟು ಕೊಂಡಿರುವೆ ನಿನ್ನ
ಕಣ್ರೆಪ್ಪೆಯಲ್ಲಿ ಹಿಡಿದಿಟ್ಟು ಕೊಂಡಿರುವೆ ಕಣ್ಣೀರು
ಅದಕ್ಕೊಮ್ಮೆ ಮಳೆಯಾಗಿ ಹರಿದು ಹೋಗಲು
ಈ ಒಂದು ರಾತ್ರಿಯ ಸಮಯ ಕೊಡು

ಮರೆಯುವುದು ಖಂಡಿತವಾಗಿದ್ದಾಗ ನಂಬಿಕೆ
ಹುಟ್ಟಿಸಿ ನಾನಿಂದು ನರಳುವಂತೆ ಮಾಡಿದ್ದೇಕೆ
ಈ ಕೆಲವೇ ಕಲವು ಪ್ರಶ್ನೆಗಳ ಕೇಳಲಾದರೂ
ಈ ಒಂದು ರಾತ್ರಿಯ ಸಮಯ ಕೊಡು

4 comments:

ಬಾಲು said...

ಚೆನಾಗಿದೆ ಕವನ. ನಿಮಗೆ ಅ೦ತ ಅಲ್ಲ, ಎಲ್ಲರಿಗೂ ಒ೦ದು ರಾತ್ರೆಯ ಸಮಯ ಬೇಕಿದೆ. :) ಅರ್ಥಪೂರ್ಣ ಕವಿತೆ.

PrashanthKannadaBlog said...

ಧನ್ಯವಾದಗಳು ಬಾಲು. ಜೀವನ ಒಂದು ಅವಕಾಶ ಕೊಟ್ಟರೆ ಗೊತ್ತಿಲದೆ ಆದ ಎಷ್ಟೊಂದು ತಪ್ಪುಗಳನ್ನು ಸರಿ ಮಾಡಿ ಕೊಳ್ಳ ಬಹುದಲ್ಲವೇ?

Anonymous said...

nice one...:-) nanu nimma kanava moddle odiddare.. i would have convinced my love like you:-)

PrashanthKannadaBlog said...

ಕಳೆದು ಕೊಂಡದ್ದು ನಮ್ಮದಲ್ಲವೆಂದು ತಿಳಿದಿದ್ದರೂ ನಾವದನ್ನೇ ನೆನೆಯುವುದು ಜೀವನದ ಒಂದು ಸೋಜಿಗ.ನಾನು ನೀವು ಯಾರೂ ಅದಕ್ಕೆ ಹೊರತಲ್ಲ

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ