ನನ್ನವಳ ಮುತ್ತಿನ ಮಳೆ
ಮನದಲ್ಲಿ ಸಂತಸದ ಹೊಳೆ
ಕಳೆಯಿತೆಲ್ಲಾ ದುಃಖದ ಕೊಳೆ
ನಾನೇ ಸ್ವರ ನನ್ನವಳೆ ರಾಗ
ಮಧು ಮಂಚವೇ ವೀಣೆ
ಕೂಡಿ ಕಳೆವ ಕಾಡಿ ಪಡೆವ
ಮುತ್ತುಗಳೇ ಮಧುರ ಗಾನ
ಮುತ್ತಿನ ಮತ್ತೇ ಗಮ್ಮತ್ತು
ಮರೆಯುವುದೆಲ್ಲಾ ದೌಲತ್ತು
ನೀನಾರೆಂದು ಮರೆಸುವುದೇ
ಅದರ ಹಕೀಕತ್ತು
ಸುರಿಯುವ ಸ್ವಾತಿಮಳೆ ನವಿಲಿನ
ಕುಣಿತಕ್ಕೆ ಆಸರೆಯಾದಂತೆ
ಒಣಗಿರುವ ಮನದ ಮರಕ್ಕೆ
ನೀರೆರೆಯುವುದು ನನ್ನವಳ ಮುತ್ತು
1 comment:
ಮುತ್ತಿನ ಸುತ್ತ ಮತ್ತಿನಾ ಗತ್ತಿನಲ್ಲಿ ಒತ್ತೊತ್ತಾಗಿ ಓಡಾಡಿದೆ ಕವನ!! ನೈಸ್.
Post a Comment