ಮರೆಯಾಗಿತ್ತು ಕಾಣಬೇಕೆಂಬ ದಶಕಗಳ ತುಡಿತ
ಆಕೆಯ ನಿನ್ನೆ ಕಂಡಾಗ
ನನ್ನ ನಾನೇ ಪ್ರಶ್ನಿಸುವಂತಿತ್ತು ಇವಳೇನಾ
ನನ್ನಂದಿನ ಮನದನ್ನೆ
ಮನಸು ಹೊರಡುತ್ತಿತ್ತು ಬಣ್ಣದ ತೇರಿನ ಮೆರವಣಿಗೆ
ಅವಳ ಜೊತೆ
ಕನಸು ಮೀಸಲಾಗಿತ್ತು ಕೇವಲ ಅವಳಿಗೆ
ಇಂದವಳು ಅಪರಿಚಿತೆ
ಹಂಚಿ ತಿಂದ ಅನ್ನ ಹಾಲ ಬಿಳುಪಿನ ಅವಳ ಬಣ್ಣ
ತೆಕ್ಕೆಯಲ್ಲಿ ಕರಗುತ್ತಿದ್ದಾಗಿನೆ ದೈವಿಕ ಸುಖ
ಅವಳನ್ನಗಲಿದಾಗ ಶೂನ್ಯವಾಗಿ ಕಂಡಿದ್ದ ಜಗತ್ತು
ಭ್ರಮೆಯೇ ಎಂಬ ಶಂಕೆ
2 comments:
ನಿಮ್ಮ ತಾಣಕ್ಕೆ ಮೊದಲ ಭೇಟಿ ಪ್ರಶಾ೦ತ್. ಉತ್ತಮವಾಗಿ ಬರೆಯುತ್ತೀರಿ. ಭಾವನೆಗಳನ್ನು ಮತ್ತಷ್ಟು ಆಳದಲ್ಲಿ ಇಳಿಸಿ..!
ಜಗತ್ತು ಭ್ರಮೆಯಲ್ಲ ಪ್ರಶಾ೦ತ್, ಭಾವಗಳು ಭ್ರಮೆ..ಏಕೆ೦ದರೆ ಅವು ಬದಲಾಗುತ್ತಲೇ ಇರುತ್ತವೆ.
ಶುಭಾಶಯಗಳು
ಅನ೦ತ್
ಧನ್ಯವಾದಗಳು ಅನಂತ್ ಪ್ರೋತ್ಸಾಹಕ್ಕೆ. ಬದಲಾವಣೆ ಜಗದ ನಿಯಮವಲ್ಲವೇ.
Post a Comment