Monday 20 October 2008

ಬದುಕಿದ್ದೂ ಸತ್ತವರು

ನನಗಾಗ ಹೆಚ್ಚುಕಮ್ಮಿ ೧೦ ವರ್ಷ. ಒಂದು ದಿನ ದೇವಾಲಯದಲ್ಲಿ ಭಜನೆ ಮುಗಿಸಿ ಮನೆ ಕಡೆಗೆ ಬರುತ್ತಿದ್ದೆ.ಗೆಳೆಯ ವಿಠಲ ಅವತ್ಥು ಜೊತೆಗಿರಲಿಲ್ಲ.
ಹಿಂದಿನ ದಿನ ರಾತ್ರಿ ಯಾರೋ ಭೂತದ ಬಗ್ಗೆ ಮಾತಾಡುವುದನ್ನು ಕೇಳಿಸಿಕೊಂಡದ್ದಕ್ಕೋ ಏನೋ ಸಿಕ್ಕಾಪಟ್ಟೆ ಹೆದರಿಕೊಂಡು ಬೇಗ ಬೇಗ ಹೆಜ್ಜೆ ಹಾಕುತ್ತಿದ್ದೆ.
ಅಷ್ಟರಲ್ಲಿ ಯಾರೋ ಮಾಣಿ ಇಲ್ಲಿ ಬನ್ನಿ ಎಂದು ಹಿಂದಿನಿಂದ ಕರೆದರು. ನೋಡಿದರೆ ನಮ್ಮ ಮನೆಗೆ ಕೆಲಸಕ್ಕೆ ಬರುವ ಬೊಗ್ರ.
ಸ್ವ್ಲಲ್ಪ ಬೊಗ್ರನ ಬಗ್ಗೆ ಹೇಳಿ ಮತ್ತೆ ಕಥೆ ಮುಂದುವರಿಸೋಣ. ತುಂಬಾ ಸಾಧು ಮನುಷ್ಯ ನಮ್ಮ ಬೊಗ್ರ. ಬೆಳಿಗ್ಗೆ ೮ ಘಂಟೆಗೆ ಬಂದರೆ ಸಾಯಂಕಾಲ ೬ ಘಂಟೆತವರೆಗೆ ಗದ್ದೆ, ತೋಟದ ಕೆಲಸ ಮಾಡುತ್ತಾನೆ.ಒಮ್ಮೆಗೆ ೦.೫ ಕೇಜಿ ಅನ್ನ ತಿನ್ನುತ್ತಾನೆ. ಅಜ್ಜಿ ಹೇಳುತ್ತಿದ್ದರು ಇವನಿಗೆ ಅನ್ನ ಬೇಯಿಸಿ ನಾನು ಬೇಗ ಮುದುಕಿಯಾದೆನೆಂದು.ನಾನೆಂದರೆ ಬೊಗ್ರನಿಗೆ ತುಂಬಾ ಪ್ರೀತಿ. ನನಗೆ ಕಥೆ ಹೇಳುತ್ತಾ, ಹೊಳೆ ಬದಿಗೆ ಕರೆದು ಕೊಂಡು ಹೋಗಿ ಅಲ್ಲಿ ಸಿಗುವ ಹಣ್ಣು ತಿನ್ನಿಸುತ್ತಿದ್ದ.
ಸರಿ ಮರಳಿ ನಮ್ಮ ಮುಖ್ಯವಾಹಿನಿಗೆ ಮರಳಿ ಬರೋಣ. ಬೊಗ್ರ ಕರೆದ ಎಂದು ಹತ್ತಿರ ಹೋದರೆ, ಬೊಗ್ರನಲ್ಲಿ ಏನೋ ನನಗೆ ಗುರಿತಸಲಾಗದ ವ್ಯತ್ಯಾಸ. ಮಾತು ತೊದಲುತ್ತಿದೆ, ಏನೋ ಕೆಟ್ಟ ವಾಸನೆ ಬಾಯಿಯಿಂದ.ಮಾಣಿ ಯಾರಿಗೂ ಹೇಳಬೇಡ. ನಾನು ನಾಳೆ ರಂಗ ಶೆಟ್ರನ್ನು ಕೊಂದು ಹಾಕುತ್ತೇನೆ. ಅವರಿಗೆ ಸುಖ ಕೊಡಲು ದಿನಾ ನನ್ನ ಹೆಂಡತಿಯೇ ಬೇಕು. ಅದೂ ನನ್ನ ಹತ್ರನೇ ಅವಳ ಸೌಂದರ್ಯವನ್ನು ಹೊಗಳುತ್ತಾರೆ.ದುಡ್ಡಿದ್ದರೆ ಏನೊ ಮಡಬಹುದೂಂತ ತಿಳಿದಿದ್ದಾರೆ. ನಾಳೆ ತೋರಿಸುತ್ತೇನೆ ಇವರಿಗೆ ನಾನು ಯಾರೆಂದು. ಅಷ್ಟರಲ್ಲಿ ನಾನು ಹೆದರಿ ಅಲ್ಲಿಂದ ಮನೆಗೆ ಓಡಿ ಬಂದೆ.
ಅಮ್ಮನಿಗೆ ವಿಷಯ ಹೇಳುವವರೆಗೆ ಸಮಾಧಾನವಿರಲಿಲ್ಲ. ಏ ಸುಮ್ಮನಿರು ಅವನು ಕುಡಿದು ಏನೇನೋ ಮತಾಡುತ್ತಾನೆ. ಅದನ್ನು ಇನ್ನು ಯಾರಿಗೂ ಹೇಳಬೇಡ ಎಂದು ಅಮ್ಮ ಸ್ವಲ್ಪ ಜೋರಾಗಿಯೇ ನನ್ನನ್ನು ಗದರಿದರು.
ನನಗೆ ಯಾವಾಗ ಬೆಳಗಾಗುತ್ತದೆ, ಬೊಗ್ರ ಏನು ಮಡುತ್ತಾನೋ ಎಂಬ ಕಾತುರ. ನನ್ನ ಗೆಳೆಯ ವಿಠಲನೊಡನೆ ಬೊಗ್ರನ ಸಂಭಾಷಣೆಯ ಬಗ್ಗೆ ಹೇಳಿ ಅದರ ವಿವರಣೆ ಕೇಳಿದೆ. ಅವನಿಗೂ ಬೊಗ್ರನ ಮಾತು ಅರ್ಥವಾಗಲಿಲ್ಲ.
ಆದರೆ ಬೆಳಿಗ್ಗೆ ಏನೂ ನಡೆಯಲೇ ಇಲ್ಲ. ಅದೇ ದೇವಾಲಯದ ಬಳಿ ಬೊಗ್ರ, ರಂಗ ಶೆಟ್ರ ಮುಂದೆ ಕೈ ಕಟ್ಟಿ ನಿಂತಿದ್ದ. ಅವರು ಏನೋ ಹೇಳುತ್ತಿದ್ದರೆ ಸರಿ ಸ್ವಾಮಿ ಎಂದು ತಲೆ ಆಡಿಸುತ್ತಿದ್ದ. ನನಗೆ ಆಶ್ಚರ್ಯವಾಯಿತು. ಇದೇ ಬೊಗ್ರ ನಿನ್ನೆ ಶೆಟ್ರನ್ನು ಕೊಂದ್ಯು ಹಾಕುವ ಬಗ್ಗೆ ಮಾತಡುತ್ತಿದ್ದ. ಇಂದು ನೋಡಿದರೆ ಸುಮ್ಮನಿದ್ದಾನೆ. ನನಗೆ ಏನೂ ಅರ್ಥವಾಗಲಿಲ್ಲ. ಅಮ್ಮ ಅವನ ಬಗ್ಗೆ ಹೇಳಿದ್ದು ಸರಿ ಅನ್ನಿಸಿತು.
ಸ್ವಲ್ಪ ವರ್ಷ ಕಳೆದ ಮೇಲೆ ನನಗೆ ತಿಳಿಯಿತು ಬೊಗ್ರನ ಮಾತಿನ ಅರ್ಥ. ಅವನ ದುಸ್ಠಿತಿಯ ಬಗ್ಗೆ ಅನುಕಂಪ ಮೂಡಿತು.
ಇದೆಲ್ಲ ಆದದ್ದು ೨೫ ವರ್ಷಗಲ ಹಿಂದೆ. ಕಾಲ ಮತ್ತು ಸಮುದ್ರದ ಅಲೆಗಳು ಯಾರನ್ನು ಕಾಯುವುದಿಲ್ಲ. ನಾನು ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಬೆಂಗಳೂರಿಗೆ ಬಂದೆ. ನನ್ನದೇ ಆದ ಯಾಂತ್ರಿಕ ಜೀವನದಲ್ಲಿ ಬೊಗ್ರ, ಊರು, ಶೆಟ್ರು ಎಲ್ಲಾ ನೆನಪು ಮಸುಕಾಗಿ ಹೋಯಿತು. ಅಮ್ಮನಿಗೆ ಫೋನ್ ಮಾಡಿದಾಗ ಒಮ್ಮೆ ಹೇಳಿದ್ದರು, ಬೊಗ್ರ ಇಹಲೋಕದ ವ್ಯಾಪಾರ ಮುಗಿಸಿದ ಎಂದು. ಅಮ್ಮ ಬೆಂಗಳೂರಿಗೆ ಬಂದ ಮೇಲಂತೂ ಊರಿನ ಸುದ್ದಿ ಹೇಳುವವರು ಯಾರೂ ಇಲ್ಲ.
ಕಳೆದ ಸಲ ಊರಿಗೆ ಅಮ್ಮನನ್ನು ಕರೆದು ಕೊಂಡು ಹೋಗಿದ್ದಾಗ ಯಾರೋ ಮುದುಕ ತುಂಬಾ ಕಷ್ಟ ಪಟ್ಟು ನಡೆದು ಕೊಂಡು ಅದೇ ದೇವಾಲಯದ ಬಳಿ ಹೋಗುತ್ತಿದ್ದ. ಒಂದು ಕಣ್ಣು ಬೇರೆ ಇರಲಿಲ್ಲ ಆ ಮನುಷ್ಯನಿಗೆ.ನನ್ನನ್ನು ನೋಡಿ ನಮಸ್ಕಾರ ಭಟ್ರೆ ಅಂದ. ನೋಡಿದರೆ ಅದೇ ರಂಗ ಶೆಟ್ರು. ಯಾಕೊ ಯಮನಿಗೆ ಇನ್ನು ಕರುಣೆ ಬಂದಿಲ್ಲ ಭಟ್ರೆ ನನ್ನನ್ನು ಇನ್ನೂ ಇಲ್ಲಿಯೇ ಇಟ್ಟು ನರಳಿಸುತ್ತಿದ್ದಾನೆ ಅಂದು ಅತ್ತೇ ಬಿಟ್ಟರು. ಅವರಿಗೆ ಎಲ್ಲಾ ರೀತಿಯ ಖಾಯಿಲೆಗಳು. ಹೆಂಡತಿ ಇವರ ಲೀಲೆಗಳನ್ನು ನೋಡಲಾರದೆ ತುಂಬಾ ವರ್ಷಗಳ ಹಿಂದೆಯೇ ಅತ್ಮಹತ್ಯೆ ಮಾಡಿಕೊಂಡಿದ್ದರು. ವ್ರದ್ದಾಪ್ಯದಲ್ಲಿ ಯಾರೂ ಇಲ್ಲ ಬಳಿಯಲ್ಲಿ.
ಯಾಕೋ ಒಮ್ಮೆಲೆ ನನಗೆ ಬೊಗ್ರನ ನೆನಪಾಯಿತು. ದೇವರು ಇವರನ್ನು ನರಳಿಸಲೋಸ್ಕರ ಅವನ ಕ್ಯೆಯಲ್ಲಿ ಶೆಟ್ರ ಕೊಲೆ ಮಾಡಿಸಲಿಲ್ಲವೇನೋ?

1 comment:

Anonymous said...

Nice story. Yaa it is real in life. You given a clear picture how upper cast people will use lower cast people.(only for sex)

I am waiting for Ur next story.
All the Best
Suman

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ