Friday, 21 November 2008

ನಾನು ಯಾಕೆ ಬರೆಯುತ್ತೇನೆ

ಬಾಲ್ಯದಿಂದಲೂ ನಾನು ಕಂಡು ಕೊಂಡ ಉತ್ತಮ ಸಂಗಾತಿ ಎಂದರೆ ಓದು.
ಓರಗೆಯ ಗೆಳೆಯರೆಲ್ಲಾ ಬೇರೆ ಬೇರೆ ರೀತಿಯ ಮನೋರಂಜನೆಯ ಮಾರ್ಗ ಆರಿಸಿಕೊಂಡಾಗ ನನಗೆ ಇಷ್ಟವಾಗುತ್ತಿದ್ದದ್ದು ಕಥೆ, ಕಾದಂಬರಿಗಳು. ಗೆಳೆಯರು ಬಣ್ಣ ಬಣ್ಣದ ಕನಸು ಕಟ್ಟುತ್ತಿದ್ದರೆ, ನನಗೆ ಬರುತ್ತಿದ್ದ ಕನಸು ಹೊಟ್ಟೆ ತುಂಬಾ ಊಟ ಮಾಡಿದಂತೆ. ಯಾರಿಗೆ ಏನು ಕೊರತೆ ಇದೆಯೋ ಅದು ಕನಸಿನ ರೂಪದಲ್ಲಿ ಬರುತ್ತದಂತೆ.
ಆ ಕಾಲದಿಂದಲೂ ನನ್ನನ್ನು ನಾನಾಗಿ ಬದುಕಲು, ಬೆಳೆಯಲು ಅನುವು ಮಾಡಿ ಕೊಟ್ಟದ್ದು ಕಥೆ ಪುಸ್ತಕಗಳು.
ಏನಾದರೂ ಬರೆಯ ಬೇಕೆಂಬ ತುಡಿತ ತುಂಬಾ ದಿನದಿಂದ ಕಾಡುತ್ತಿತ್ತು. ಯಾಕೋ ಏಕಾಗ್ರತೆ ಬರುತ್ತಿರಲಿಲ್ಲ. ೩ ತಿಂಗಳಿಂದ ನನ್ನದಲ್ಲದ ದೇಶದಲ್ಲಿ ಹೊಟ್ಟೆ ಪಾಡಿಗಾಗಿ ದುಡಿಯುತ್ತಿದ್ದೇನೆ.
ಜೀವನದಲ್ಲಿ ಅನುಭವಿಸಿದ ಒಳಿತು, ಕೆಡುಕುಗಳನ್ನು ಕಥೆ ಕವನದ ರೂಪದಲ್ಲಿ ತೋಡಿ ಕೊಳ್ಳುತ್ತಿದ್ದೇನೆ. ನಿಮ್ಮ ಅನುಭವಗಳನ್ನು ದಯವಿಟ್ಟು ಹಂಚಿಕೊಳ್ಳಿ. ಆದರೆ ಒಂದು ಕೋರಿಕೆ ಯಾರ ಮನಸ್ಸಿಗೂ ನೋವಾಗುವಂತೆ ಬರೆಯಬೇಡಿ. ಓದು ಮನಸ್ಸಿಗೆ ಮುದ ಕೊಟ್ಟರೆ ಅಥವಾ ಇನ್ನೂ ಚೆನ್ನಾಗಿ ಬರೆಯ ಬಹುದೆನಿಸಿದರೆ ಬಿಚ್ಚು ಮನಸ್ಸಿನಿಂದ ತಿಳಿಸಿ.

ಪ್ರೀತಿಯಿಂದ
ಪ್ರಶಾಂತ

ನನ್ನ ಮನಸ್ಸು

ನನ್ನ ಕಣ್ಣೀರು ಮಳೆಯಾಗಿ ಹರಿದರೂ
ಮನದಲ್ಲಿ ಇನ್ನೂ ಇಂಗದ ಬಾಯಾರಿಕೆ

ಈ ಹ್ರದಯ ಬುದ್ದಿಯ ಮಾತು ಕೇಳುತ್ತಿಲ್ಲ
ಯಾರೋ ಗಂಟಲೊತ್ತಿ ಹಿಡಿದರೆ
ಹಾಡು ತುಟಿಯಿಂದ ಹೇಗೆ ಹೊಮ್ಮೀತು
ಪ್ರತೀಕ್ಶಣ ನೀನು ಬರುವೆಯೆಂಬ ಸುಳ್ಳು
ಭರವಸೆಯಲ್ಲಿ ದಿನ ಕಳೆಯುತ್ತಿದೆ

ವರುಷಗಳೇ ಕಳೆದು ಹೋದವು ನಾವಿಬ್ಬರಗಲಿ
ಕೋಲ್ಮಿಂಚು ಬಾನಲ್ಲಿ ಹೊಳೆದು ಮರೆಯಾದಂತೆ
ಕಳೆದು ಹೋದೆ.
ಮನಸ್ಸು ಕಣ್ಣು ಮುಚ್ಚಾಲೆ ಆಟ ಅಡುತ್ತಿದೆ
ನಿನ್ನ ನೆನಪಿನೊಂದಿಗೆ

ನನ್ನ ನೆನಪು

ನನ್ನ ಚಿತ್ರವನ್ನು ಕಣ್ಣಿನಿಂದ ಮರೆಮಾಚಿ
ಮನಸ್ಸಿನಿಂದ ಅಳಿಸಲಾಗದೆ ಒದ್ದಾಡುತ್ತಿರುವೆ
ನನಗೇಕೊ ಅಚಲವಾದ ನಂಬಿಕೆ
ನೀ ನನ್ನನ್ನೆಂದೂ ಮರೆಯಲಾರೆ

ಎಲ್ಲಿ ಹೋದರೂ ನನ್ನ ನೆನಪು ನಿನ್ನ ಕಾಡುತ್ತದೆ
ಒಮ್ಮೆ ಕಣ್ಣೀರಾಗಿ ಮತ್ತೊಮ್ಮೆ ಬಿಕ್ಕಳಿಕೆಯಾಗಿ
ನಾನು ಪ್ರೀತಿಯೆಂಬ ಎಣ್ಣೆ ಹಾಕಿ ಉರಿಸಿದ ಹಣತೆ
ನೀನೆಂದೂ ನಂದಿಸಲಾರೆ

ಮಾತಿನ ಮಧ್ಯೆ ನನ್ನ ಹೆಸರು ನುಸುಳಲು
ನಿನ್ನ ಹ್ರದಯ ವಿಲಿವಿಲಿ ಒದ್ದಾಡುತ್ತದೆ
ವಿವಶತೆಯ ಕಾರಣ ಏನೆಂದು ಕೇಳಿದರೆ
ನೀನೆಂದೂ ಹೇಳಲಾರೆ

ನಿನ್ನ ಆಗಮನ

ಒಡಲು ಹಸಿದವನಿಗೆ ಅನ್ನದಂತೆ
ಮರುಭೂಮಿಯಲ್ಲಿ ನೀರಿನಂತೆ
ಚಳಿಯಿಂದ ನಡುಗುತ್ತಿದ್ದವನಿಗೆ ಕಂಬಳಿಯಂತೆ
ಕತ್ತಲು ಆವರಿಸಿದ್ದ ಕಾಡಿಗೆ ಬೆಳ್ಳಿ ಕಿರಣದಂತೆ
ದಿಕ್ಕು ತಪ್ಪಿದ್ದ ನೌಕೆಗೆ ಕಡಲ ತೀರದಂತೆ
ಬಿದ್ದಳುತ್ತಿದ್ದ ಮಗುವಿನ ಬಳಿಗೆ ಅಮ್ಮನಂತೆ

ನನ್ನ ಹುಡುಗಿಗಾಗಿ

ಯಾವಾಗಲೊಮ್ಮೆ ಕನಸುಗಳ ಜೊತೆ ಕಳೆದು ಹೋಗುತ್ತೇನೆ
ನಿನ್ನನ್ನು ಕನಸುಗಳಲ್ಲಿ ಹುಡುಕುತ್ತಾ ಮತ್ತೊಮ್ಮೆ ಕಳೆದು ಹೋಗುತ್ತೇನೆ
ಒಬ್ಬಂಟಿ ಅನ್ನಿಸಿದಾಗೆಲ್ಲಾ ನಿನ್ನೊಂದಿಗೆ ಕಳೆದ ಮಧುರ ಕ್ಷಣಗಳೇ ಸಂಗಾತಿ ನನಗೆ
ನಿನ್ನ ನೆನಪು ಯಾವಾಗಲೂ ಏಕಾಂಗಿಯಾಗಿರಲು ಬಿಡಲಿಲ್ಲ

ಇರುವೆ ಲಕ್ಷಾಂತರ ಗಾವುದ ದೂರ ಆದರೆ ಮನಸ್ಸಿಗೆ ತುಂಬಾ ಹತ್ತಿರವಿರುವೆ
ಪ್ರತೀ ಎದೆ ಬಡಿತದಲ್ಲಿ ಇನ್ನೂ ನನ್ನ ಹತ್ತಿರ ಬರುವೆ

ಯಾವುದೇ ಶರತ್ತು ನಾನಿಟ್ಟುಕೊಂಡಿಲ್ಲ ಪ್ರೀತಿಯಲ್ಲಿ ಆದರೆ
ಪ್ರಾಣಕ್ಕಿಂತ ಹೆಚ್ಚಾಗಿ ನಿನ್ನಿನ್ನು ಪ್ರೀತಿಸುತ್ತೇನೆ ಅಷ್ಟೆ

ಒಂದು ತಿರುವಿನಲ್ಲಿ ನನಗಾಗಿ ಕಾಯುತ್ತಿರುವೆ ಎಂದು ಭಾಷೆ ನೀಡಿದ್ದೆ
ಅದಕ್ಕಾಗಿ ಪ್ರತೀ ತಿರುವಿನಲ್ಲಿ ನಗುತ್ತ ಮುಂದೆ ಸಾಗುತ್ತಿರುವೆ

ಈ ಕಣ್ಣೀರಿಗೆ ನಿನ್ನ ಮೇಲೆ ಯಾವುದೇ ಆಪಾದನೆ ಇಲ್ಲ
ಹಾಗೇ ನಿನ್ನ ನೆನಪಾದಗೆಲ್ಲಾ ಸಂತೋಷದಿಂದ ಹೊಮ್ಮುತ್ತದೆ

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ