ಮನದಲ್ಲಿ ಪ್ರೀತಿಯಿರೆ ಈ ಪ್ರಪಂಚವೇ ಸ್ವರ್ಗವು
ಮನದಲ್ಲಿ ಪ್ರಿಯತಮೆಯಿರೆ ಜಗವೆಲ್ಲಾ ಮನೋಹರ
ಪ್ರೀತಿಗೇ ಪ್ರೀತಿ ಕಲಿಸಿದವಲು ನೀನು
ನಿನ್ನೊಂದು ಕುಡಿನೋಟದಿಂದ ಜೀವನ ಪಾವನ
ಹಂಸಕ್ಕೇ ನಡಿಗೆ ಕಲಿಸಿದವಳು ನೀನು
ನೀ ಕಣ್ಣೆತ್ತಿ ನೋಡಿದರೆ ಮಲ್ಲಿಗೆ ಮೊಗ್ಗೂ ನಾಚುವುದು
ನವಿಲೆಗೇ ನಾಟ್ಯ ಕಲಿಸಿದವಳು ನೀನು
ನಿನ್ನೊಂದು ಮುಗುಳ್ನಗೆಯಿಂದ ಮನ ಅಲ್ಲೋಲ ಕಲ್ಲೋಲ
No comments:
Post a Comment