ಯಾಕೋ ಕಾರಣವಿಲ್ಲದೆ ಬೇಸರ ಕಾಡುತ್ತಿದೆ. ಎಲ್ಲಾ ಇದ್ದೂ ಏನೂ ಇಲ್ಲದಂತೆ. ಸಂತೆಯ ಮಧ್ಯೆ ಕಾಡುವ ಏಕಾಂತದಂತೆ.
ನಾನೂ ನನ್ನ ಗೆಳೆಯರೆಲ್ಲ ಅವರವರ ಯಾಂತ್ರಿಕ ಜೀವನದಲ್ಲಿ ಕಳೆದು ಹೋಗಿದ್ದೇವೆ.
ನಾನು ನನ್ನದೇ ಕನಸುಗಳನ್ನು ಕಟ್ಟಿಕೊಂಡು ಸಿಗದಿರುವುದರ ಹಿಂದೆ ಓಡುತ್ತಿದ್ದೇನೆ.
ಎಲ್ಲಿ ಕಳೆದು ಹೋದವು ಅಲ್ಪ ಸುಖದಲ್ಲಿ ಖುಶಿ ಪಡುತ್ತಿದ್ದ
ಆ ದಿನಗಳು
ಏನಾದವು ಸಣ್ಣ ಪುಟ್ಟದರಲ್ಲೂ ಅಗಾಧ ಸಂತಸ ಪಡುತ್ತಿದ್ದ
ಆ ದಿನಗಳು
ಹಾರಾಡುವ ಹಕ್ಕಿಯ ಕಂಡು ಕೌತುಕ ಪಡುತ್ತಿದ್ದ
ಆ ದಿನಗಳು
ಹಕ್ಕಿಗಿಂತೆತ್ತರದಿ ಹಾರಾಡುತ್ತಿರುವಾಗೇಕೆ ಸಂತಸ
ಉಕ್ಕುತ್ತಿಲ್ಲ
ಗುಲಾಬಿಯ ಮೇಲಿನೆ ಮಂಜಿನ ಸ್ಪರ್ಶಕೆ ಪುಳಕವಾಗುತ್ತಿದ್ದ
ಆ ದಿನಗಳು
ಹೂಗಳ ಪಲ್ಲಂಗದ ಮೇಲೇಕೆ ಚುಚ್ಚುತ್ತಿವೆ ಕೇವಲ
ಮುಳ್ಳುಗಳು
ಅರೆಹೊಟ್ಟೆಯಲ್ಲಿ ಮಲಗಿ ಹಬ್ಬದೂಟದ ಕನಸು ಕಂಡಾಗಿನ
ಪುಳಕ
ಪ್ರತಿದಿನ ಮೃಷ್ಟಾನ್ನ ಭೋಜನ ಮಾಡಿದರೂ ಏಕಿಲ್ಲ
ಸಂತಸ
6 comments:
ಆ ದಿನಗಳ ನೆನಪು ಕೇವಲ ನೆನಪು ಮಾತ್ರ
ಬರುವ ದಿನಗಳ ಭರವಸೆಯೇ ಬದುಕಿಗೆ ಆಸರೆ
ಉತ್ತಮ ವಿಚಾರವನ್ನು ಮ೦ಡಿಸಿದ್ದೀರಿ ಪ್ರಶಾ೦ತ್. ಸ೦ತಸಪಡುವ ಮಕ್ಕಳ೦ತೆ ನಮ್ಮ ಮನಸ್ಸಾಗಬೇಕು. ಎಲ್ಲೋ ಓದಿದ ನೆನಪು. Leave childlike but not childish ಅ೦ತ. ಯಾ೦ತ್ರಿಕ ಜೀವನದಲ್ಲಿ ಕಳೆದುಕೊ೦ಡಿದ್ದನ್ನು ಕ್ರಿಯಾತ್ಮಕ ಜೀವನದಲ್ಲಿ ಹುಡುಕಬೇಕು..ಅಲ್ಲವೆ?
ಶುಭಾಶಯಗಳು
ಅನ೦ತ್
ಇರುವಾದ ಬಿಟ್ಟು ಇರದುದರೆಡೆಗಿನ ತುಡಿತವೇ ಜೀವನ. ಇದುವೆ ಬದುಕಿನ ವ್ಯಂಗ್ಯ!
ನಿಮ್ಮ ಅನುಭವ ಎಲ್ಲರಿಗೂ ಬಾಳಲ್ಲಿ ಬರುತ್ತೆ ಅವಾಗಾವಾಗ. ಧನಾತ್ಮಕತೆ ರೂಡಿಸಿಕೊಳ್ಳಬೇಕು.
ಡಾಕ್ಟ್ರೇ ಕೇವಲ ಮರೆವೊಂದೇ ಇದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ :-)
ನಮಸ್ಕಾರ ಅನಂತರಾಜ್ ಕಳೆದು ಕೊಳ್ಳುತ್ತಿರುವುದೇ ಜಾಸ್ತಿಯಾದಾಗ ಯಕೋ ತುಂಬಾ ಬೇಸರಾಗುತ್ತದೆ. ಆದರೂ ಇದ್ದದ್ದರಲ್ಲಿ ಖುಶಿ ಪಡುತ್ತಾ ಬದುಕುವುದು ಉತ್ತಮ
ಸೀತಾರಾಮ್ ವಂದನೆಗಳು. "ಕಾಣದ ಕಡಲಿಗೆ ಹಂಬಲಿಸಿದೆ ಮನ" ಕವಿಯ ಮಾತು ಎಷ್ಟು ಸತ್ಯವಲ್ಲವೇ
Post a Comment